ಕುರುಡು ಹುಳು (ಹಲ್ಲಿ)

ಆಂಗ್ವಿಸ್ ಫ್ರಾಜಿಲಿಸ್ ಎಂಬ ವೈಜ್ಞಾನಿಕ ಹೆಸರಿನ ಸರೀಸೃಪ (ಬ್ಲೈಂಡ್ ವರ್ಮ್) ಹಲ್ಲಿಗಳನ್ನೊಳಗೊಂಡ ಲ್ಯಾಸರ್ಟೀಲಿಯ ಉಪ ಗಣಕ್ಕೆ ಸೇರಿದೆ. ಇದನ್ನು ಕುರುಡು ಹಲ್ಲಿ ಅಥವಾ ಮಂದಹಲ್ಲಿ ಎಂದೂ ಕರೆಯುವುದುಂಟು. ಇದರ ದೇಹ ಹಾವಿನಂತೆ ಇದೆ. ಇದಕ್ಕೆ ಕಾಲಿಲ್ಲ. ಎದೆಯ ಮೂಳೆ ಮತ್ತು ಭುಜಕಟ್ಟು ಕ್ಷೀಣಿಸಿವೆ. ಬಾಲ ಬೇಕಾದಾಗ ತುಂಡಾಗಬಲ್ಲುದು. ಕುರುಡುಹುಳು ಜರಾಯುಜ. ಮೊಟ್ಟೆಗಳು ತಾಯಿದೇಹದಲ್ಲಿಯೇ ಒಡೆದು ಮರಿಗಳು ಹೊರಬೀಳುತ್ತವೆ.
(ಎಂ.ಡಿ.ಪಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ